B Sriramulu

All Photos Twitter.com
|| ಜಯ ಹನುಮಾನ ಜ್ಞಾನ ಗುಣಸಾಗರ ಜಯ ಕಪೀಸ ತಿಹುಲೋಕ ಉಜಾಗರ ರಾಮ ದೂತ ಅತುಲಿತ ಬಲಧಾಮಾ ಅಂಜನಿಪುತ್ರ ಪವನಸುತ ನಾಮಾ|| ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿ ಶುಭಾಶಯಗಳು.
ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಯಿಂದ ನಾವೆಲ್ಲರೂ ಪ್ರೇರಣೆ ಪಡೆಯೋಣ. 2/2
ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿ, ಕನ್ನಡ ಸಾಹಿತ್ಯಕ್ಕೆ ತಮ್ಮ ಬದುಕನ್ನು ಸಮರ್ಪಿಸಿಕೊಂಡು ರತ್ನನ ಪದಗಳು ಸೇರಿದಂತೆ ಅನೇಕ ಸೃಜನಶೀಲ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಸುಪ್ರಸಿದ್ಧ ಸಾಹಿತಿ ಡಾ. ಜಿ. ಪಿ. ರಾಜರತ್ನಂ ಅವರ ಜನ್ಮದಿನದಂದು ನನ್ನ ಶತ ಶತ ನಮನಗಳು. 1/2
ಮಾಜಿ ಶಾಸಕರಾದ ಶ್ರೀ ಸುರೇಶ್ ಬಾಬು ಮತ್ತಿತರರು ಹಾಜರಿದ್ದರು. 2/2
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕು ಕುರುಗೋಡಿಗೆ ಕಾರ್ಯಕ್ರಮ ನಿಮಿತ್ತ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ಆಕಸ್ಮಿಕವಾಗಿ ಎದುರಾದ ಕೂಲಿ ಕಾರ್ಮಿಕರ ಕಷ್ಟ ಕಾರ್ಪಣ್ಯಗಳನ್ನು ಆಲಿಸಿ, ಉಭಯ ಕುಶಲೋಪರಿ ವಿಚಾರಿಸಲಾಯಿತು‌. ಈ ವೇಳೆ ಅವರು ತೋರಿದ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಋಣಿಯಾಗಿರುವೆ. 1/2
ಭಾರತೀಯ ನೌಕಾಪಡೆ ದಿನ ಜಗತ್ತಿನ 5 ನೇ ಅತಿದೊಡ್ಡ ನೌಕಾಪಡೆಯಾದ ಭಾರತೀಯ ನೌಕಾದಳದ ಸೇನಾನಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಕೃತಜ್ಞತೆ ಸಲ್ಲಿಸೋಣ. ನೌಕಾಪಡೆ ವೀರರ ಧೈರ್ಯ, ಶೌರ್ಯ , ಬದ್ಧತೆ, ಸಮರ್ಪಣೆ ಮತ್ತು ಉತ್ಸಾಹಗಳಿಂದ ನಾವೆಲ್ಲರೂ ಪ್ರೇರಣೆ ಪಡೆಯೋಣ. #NavyDay #IndianNavy @indiannavy
ರಾಷ್ಟ್ರೀಯ ವಕೀಲರ ದಿನ ಸಂವಿಧಾನದ ಮುಂಚೂಣಿ ರಕ್ಷಕರಾದ ನ್ಯಾಯವಾದಿ ಸಮುದಾಯಕ್ಕೆ ದೇಶದ ಪ್ರಥಮ ರಾಷ್ಟ್ರಪತಿ, ಮಹಾನ್‌ ನ್ಯಾಯವಾದಿ ಡಾ. ಬಾಬು ರಾಜೇಂದ್ರ ಪ್ರಸಾದ್‌ ಅವರ ಜನ್ಮದಿನದಂದು ಆಚರಿಸುವ ಸ ‘ವಕೀಲರ ದಿನಾಚರಣೆ’ಯ ಶುಭಾಶಯಗಳು.
ಶ್ರೇಷ್ಠ ಹಾಕಿ ಮಾಂತ್ರಿಕ, ಕ್ರೀಡಾ ಲೋಕದ ಧ್ರುವ ತಾರೆ ಮೇಜರ್ ಧ್ಯಾನ್ ಚಂದ್ ಅವರ ಪುಣ್ಯಸ್ಮರಣೆಯಂದು ನನ್ನ ಅನಂತಕೋಟಿ ನಮನಗಳು. ಅವರು ಕ್ರೀಡಾಲೋಕಕ್ಕೆ ನೀಡಿದ ಅನನ್ಯ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸೋಣ.
18 ವರ್ಷಕ್ಕೆ ದೇಶಕ್ಕಾಗಿ ನೇಣುಗಂಬವೇರಿದ ಕ್ರಾಂತಿಯ ಕಿಡಿ, ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯ ಚಿಲುಮೆ ಖುದಿರಾಮ ಬೋಸ್ ಅವರ ಜನ್ಮಜಯಂತಿಯಂದು ನನ್ನ ಶತ ಶತ ನಮನಗಳು. ಇಂದಿನ ಮಕ್ಕಳಿಗೆ ಇಂಥ ಮಹಾನ್ ಹೋರಾಟಗಾರರ ಜೀವನ ಗಾಥೆ ತಿಳಿಸಿ, ದೇಶಭಕ್ತಿಯನ್ನು ಜಾಗೃತಗೊಳಿಸಲು ಸಂಕಲ್ಪ ಮಾಡೋಣ.
ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕರಾದ ಶ್ರೀಯುತ @siddaramaiah ಅವರು ಆದಷ್ಟು ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುವೆ.
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಕೇಂದ್ರ ಸಚಿವರಾದ ಶ್ರೀ @JPNadda ಜೀ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಕ್ಷೇತ್ರದಲ್ಲಿ ಅನೇಕ ರೈತರು ಕೊಳವೆ ಬಾವಿಗಳನ್ನು ಕೊರೆಸಿದ್ದು, ಅವರೆಲ್ಲರಿಗೂ ನಮ್ಮ ಇಲಾಖೆ ವತಿಯಿಂದ ಅಗತ್ಯವಿರುವ ಸವಲತ್ತುಗಳನ್ನು ನೀಡಲಾಗುತ್ತದೆ. ಇದರಿಂದ ಕ್ಷೇತ್ರದ ಸಾವಿರಾರು ರೈತರು ವರ್ಷಕ್ಕೆ ಎರಡಕ್ಕಿಂತ ಹೆಚ್ಚಿನ ಬೆಳೆಗಳನ್ನು ಬೆಳೆಯಬಹುದಾಗಿದ್ದು, ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುತ್ತದೆ. 2/2
ನನ್ನ ಮತಕ್ಷೇತ್ರವಾದ ಮೊಳಕಾಲ್ಮೂರಿನಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಹಮ್ಮಿಕೊಂಡಿದ್ದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿದ ಫಲಾನುಭವಿಗಳಿಗೆ ಪಂಪು ಮೋಟಾರ್ ಹಾಗೂ ಪೂರಕ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು. 1/2
ತೆಪ್ಪೋತ್ಸವ ಹಾಗೂ ಕಾರ್ತಿಕೋತ್ಸವ ನಿಮಿತ್ತ ಸುಮಾರು 250 ಅಡಿಗಳಷ್ಟು ದೂರ ತೆಪ್ಪವು ಸರಾಗವಾಗಿ ಚಲಿಸಿದ್ದು ಒಂದು ಪವಾಡವೇ ಸರಿ. ಇಂತಹ ಪವಿತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ನನ್ನ ಪೂರ್ವ ಜನ್ಮದ ಪುಣ್ಯ ಎಂದುಕೊಳ್ಳುವೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸ್ವಾಮಿಯ ಕೃಪೆಗೆ ಪಾತ್ರರಾದರು. 3/3
ಒಳಮಠ, ಹೊರಮಠ ಮತ್ತು ಏಕಾಂತಸ್ವಾಮಿ ಮಠ ಹಾಗೂ ಶ್ರೀ ಈಶ್ವರ ದೇವಸ್ಥಾನ ಒಳಗೊಂಡಂತೆ “ಲಕ್ಷ ದೀಪೋತ್ಸವ ಕಾರ್ಯಕ್ರಮ” ಹಾಗೂ ಶ್ರೀ ಗುರು ತಿಪ್ಪೇರುದ್ರಸ್ವಾಮಿ “ಬೆಳ್ಳಿ ರಥೋತ್ಸವ” 12 ವರ್ಷಗಳ ನಂತರ ನಡೆದ ಈ ಐತಿಹಾಸಿಕ ಕಾರ್ಯಕ್ರಮ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿಯಲಿದೆ. 2/3
ನನ್ನ ಮತಕ್ಷೇತ್ರವಾದ ಮೊಳಕಾಲ್ಮೂರಿನ ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರದ ಹಿರೇಕೆರೆಯಲ್ಲಿ ತೆಪ್ಪೋತ್ಸವ ಹಾಗೂ ಕಾರ್ತಿಕ್ಸೋತ್ಸವ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಅದ್ಧೂರಿಯಾಗಿ ಜರುಗಿತು. 1/3
ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳುವುದೇ ಇಂತಹ ಸ್ಪರ್ಧೆಗಳಿಂದ. ಹೀಗಾಗಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಜರುಗಬೇಕೆಂದು ಆಶಿಸಿದೆನು. ಬಳಿಕ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡಿದವು. 2/2
ನನ್ನ ಉಸ್ತುವಾರಿ ಜಿಲ್ಲೆಯಾದ ಬಳ್ಳಾರಿಯ ಕಂಟೋನ್ಮೆಂಟ್‍ನಲ್ಲಿರುವ ಎಸ್. ಕೆ. ಮೋದಿ ನ್ಯಾಷನಲ್ ಸ್ಕೂಲ್‍ನಲ್ಲಿ ನಡೆದ 2022-23ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳ ಉದ್ಘಾಟನೆ ನೆರವೇರಿಸಲಾಯಿತು. 1/2
ವಿಧಾನಸೌಧದ ನಿರ್ಮಾತೃ‌ , ಕರ್ನಾಟಕ ಏಕೀಕರಣಗೊಳಿಸಲು ಶ್ರಮಿಸಿದ ಧೀಮಂತ ನಾಯಕ, ನಾಡು ಕಂಡ ಸರಳ, ಸಜ್ಜನ ರಾಜಕಾರಣಿ, ರಾಜ್ಯದ ಎರಡನೇ ಮುಖ್ಯಮಂತ್ರಿಗಳಾದ ದಿ. ಕೆಂಗಲ್ ಹನುಮಂತಯ್ಯ ಅವರ ಪುಣ್ಯಸ್ಮರಣೆಯಂದು ನನ್ನ ಶತಕೋಟಿ ನಮನಗಳು. ಅವರು ನಾಡಿಗೆ ನೀಡಿದ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸೋಣ.
ತಮ್ಮ ಸರಳತೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ, ನನ್ನ ಆತ್ಮೀಯರು ಹಾಗೂ ಗಣಿ ಭೂ ವಿಜ್ಞಾನ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶ್ರೀಯುತ @HalappaAchar ಅವರಿಗೆ ಜನ್ಮ ದಿನದ ಶುಭಾಶಯಗಳು. ದೇವರು ಇನ್ನಷ್ಟು ಆಯುರ್ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುವೆ.
ವಿಶ್ವ ಏಡ್ಸ್ ದಿನಾಚರಣೆ ಇಡೀ ವಿಶ್ವವನ್ನೇ ಭಾದಿಸುತ್ತಿರುವ ಏಡ್ಸ್ ಮಹಾಮಾರಿಯ ಕುರಿತು ಜಾಗೃತಿ ವಹಿಸೋಣ, ನಾವೆಲ್ಲರೂ ವಿಶ್ವ ಏಡ್ಸ್ ದಿನಾಚರಣೆಯಂದು ಏಡ್ಸ್ ಬಗ್ಗೆ ಅರಿವು ಮೂಡಿಸೋಣ.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀ ಪಿ.ಟಿ.ಶ್ರೀನಿವಾಸ ನಾಯಕ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಕೆ.ವೈ.ನಾರಾಯಣಸ್ವಾಮಿ, ಡಾ.ಬಿ.ಅನಂತ್ ಮತ್ತಿತರರು ಉಪಸ್ಥಿತರಿದ್ದರು. 3/3
ಇಂತಹ ಶೈಕ್ಷಣಿಕ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗಿ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬೆಳೆಯಲು ಇದೊಂದು ಉತ್ತಮ ವೇದಿಕೆಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದೆನು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಕಣ್ಮನಸೆಳೆದವು. 2/3
ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದ 2022-23ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಕನ್ನಡ ಸಂಘ, ಎನ್‍ಸಿಸಿ, ಎನ್‍ಎಸ್‍ಎಸ್, ರೋವರ್ಸ್ ಮತ್ತು ರೇಂಜರ್ಸ್ ಇತರೆ ಚಟುವಟಿಕೆಗಳ ಕುರಿತು ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಲಾಯಿತು. 1/3
ಭಾರತದ ಹೆಮ್ಮೆಯ ವಿಜ್ಞಾನಿ, ಭಾರತ ಉಪಖಂಡದಲ್ಲಿ ಪ್ರಯೋಗ ವಿಜ್ಞಾನಕ್ಕೆ ಅಡಿಪಾಯ ಹಾಕಿದ ಸರ್ ಜಗದೀಶ್ ಚಂದ್ರ ಬೋಸ್ ಅವರ ಜನ್ಮಜಯಂತಿಯಂದು ನನ್ನ ಶತ ಶತ ನಮನಗಳು. ಅವರು ವಿಶ್ವಕ್ಕೆ ನೀಡಿದ ಕೊಡುಗೆಯಿಂದ ನಾವೆಲ್ಲರೂ ಸ್ಫೂರ್ತಿ ಪಡೆಯೋಣ.
ಭಾರತದ ಆಟೋಮೋಟಿವ್ ಉದ್ಯಮದ ದಿಗ್ಗಜರಲ್ಲಿ ಒಬ್ಬರಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಉಪಾಧ್ಯಕ್ಷರಾದ ಶ್ರೀ ವಿಕ್ರಮ್ ಕಿರ್ಲೋಸ್ಕರ್ ಅವರ ಅಕಾಲಿಕ ನಿಧನಕ್ಕೆ ನನ್ನ ಸಂತಾಪಗಳು. ಅವರ ಆತ್ಮಕೆ ಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕುಟುಂಬ ಮತ್ತು ಸ್ನೇಹಿತರಿಗೆ ನೀಡಲಿ ಎಂದು ಪ್ರಾರ್ಥಿಸುವೆ.
ಅಭಿಮಾನಿಗಳು ಹಾಗೂ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವೆ. 2/2 ಓಂ ಶಾಂತಿ.
ಯಕ್ಷಗಾನ ದಿಗ್ಗಜರು,ಪ್ರಾಸಬದ್ಧ ಮಾತಿನ ಮೋಡಿಗಾರ,ಮಾಜಿ ಶಾಸಕರು, ಸಂಸ್ಕಾರ ಭಾರತಿ, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರು ಆದ ಶ್ರೀ ಕುಂಬಳೆ ಸುಂದರ ರಾವ್ ಅವರು ನಿಧನರಾದ ಸುದ್ದಿ ಕೇಳಿ ತುಂಬಾ ಬೇಸರವಾಯಿತು. ,ಅವರ ದಿವ್ಯಾತ್ಮಕ್ಕೆ ಚಿರಶಾಂತಿ ದೊರೆಯಲಿ. 1/2
ಬ್ರಾಂಡ್ ಹೆಸರನ್ನು ಸೂಚಿಸಲು ಕೊನೆಯ ದಿನಾಂಕ 5.12.2022 ಆಗಿರುತ್ತದೆ. ನಿಮ್ಮ ಬ್ರ್ಯಾಂಡ್ ಐಡಿಯಾಗಳನ್ನು [email protected] ಮೇಲ್ ಗೆ ಅಥವಾ ನಿಗಮದ ಫೇಸ್ ಬುಕ್/ಟ್ವಿಟರ್ @KSRTC_Journeys ಖಾತೆಗೆ ಸಲ್ಲಿಸಬಹುದಾಗಿದೆ. 3/3
ಪ್ರತಿ ಮಾದರಿಯ ವಾಹನಗಳಿಗೆ ಉತ್ತಮ ಬ್ರಾಂಡ್ ಹೆಸರನ್ನು ಸೂಚಿಸುವ ವಿಜೇತರಿಗೆ 10,000 ನಗದು ಬಹುಮಾನವನ್ನು ಹಾಗೂ ಉತ್ತಮ ಗ್ರಾಫಿಕ್ಸ್ ನೀಡಿದವರಿಗೆ ತಲಾ ರೂ. 25,000 ಬಹುಮಾನವನ್ನು ನೀಡಲಾಗುವುದು. 2/3
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಆರಂಭಿಸಲಿರುವ ಮಲ್ಟಿ ಆಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನಗಳಿಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ ಬ್ರಾಂಡ್ ಹೆಸರು ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ಸ್ ಗಳನ್ನು ಆಹ್ವಾನಿಸುತ್ತಿದೆ. 1/3
ನನ್ನ ಉಸ್ತುವಾರಿ ಜಿಲ್ಲೆಯಾದ ಬಳ್ಳಾರಿಯ ನನ್ನ ಗೃಹ ಕಚೇರಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರ ಕುಂದು -ಕೊರತೆಗಳನ್ನು ಆಲಿಸಿ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಯಿತು. ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದೆ. #??????_?????????
ಸಮಾರಂಭದಲ್ಲಿ ವಿವಿಧ ಮಠಗಳ ಮಠಾಧೀಶರು, ಧರ್ಮಗುರುಗಳು, ಕೊಪ್ಪಳ ಲೋಕಸಭಾ ಸದಸ್ಯರಾದ ಶ್ರೀ ಸಂಗಣ್ಣ ಕರಡಿ, ಶಾಸಕರಾದ ಶ್ರೀ ರಾಘವೇಂದ್ರ ಹಿಟ್ನಾಳ ಸೇರಿದಂತೆ ವಿವಿಧ ಮುಖಂಡರು ಸ್ಥಳೀಯ ನಾಯಕರು ಸೇರಿದಂತೆ ಮತ್ತಿತರ ಮುಖಂಡರು ಭಾಗವಹಿಸಿದ್ದರು. 2/2
ಕೊಪ್ಪಳ ಜಿಲ್ಲೆಯ ಸುಕ್ಷೇತ್ರ ತಿಗರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನೂತನ ದಾಂಪತ್ಯಕ್ಕೆ ಕಾಲಿಟ್ಟ ಸತಿಪತಿಗಳಿಗೆ ಶುಭ ಹಾರೈಸಿ ವಾಲ್ಮೀಕಿಯವರು ತೋರಿಸಿದ ಮಾರ್ಗದರ್ಶನದಲ್ಲಿ ಜೀವನ ನಡೆಸಬೇಕೆಂದು ಕರೆ ನೀಡಲಾಯಿತು. 1/2
ರಾಜ್ಯಾದ್ಯಂತ ಈ ವಾಹನವು ಸಂಚರಿಸಲಿದ್ದು, ಪ್ರಯಾಣಿಕರು ಕಡ್ಡಾಯವಾಗಿ ಸೀಟ್ ಬೆಲ್ಟ್‍ಗಳನ್ನು ಧರಿಸುವುದು ಸೇರಿದಂತೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ಪ್ರಯಾಣಿಕರು ತೆಗೆದುಕೊಳ್ಳುವ ಕುರಿತು ಅಭಿಯಾನ ನಡೆಸಲಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು. 2/2
ವಾಹನಗಳನ್ನು ಚಾಲನೆ ಮಾಡುವ ವೇಳೆ ಉಂಟಾಗಬಹುದಾದ ಅವಘಡಗಳನ್ನು ತಪ್ಪಿಸಲು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿರುವ ಜನಜಾಗೃತಿ ಮೂಡಿಸುವ ಪ್ರಚಾರದ ವಾಹನಕ್ಕೆ ನನ್ನ ಉಸ್ತುವಾರಿ ಜಿಲ್ಲೆಯಾದ ಬಳ್ಳಾರಿಯ ಕಚೇರಿಯಲ್ಲಿ ಚಾಲನೆ ನೀಡಲಾಯಿತು. 1/2 @tdkarnataka
Pioneer of widow remarriage, orphanages for widows' children, women's education, social reform revolutionary Mahatma Jyotiba Phule – offering respectful obeisance to the great soul. Let us all work to uphold and spread his ideals.
ವಿಧವಾ ವಿವಾಹ, ವಿಧವೆಯರ ಮಕ್ಕಳಿಗಾಗಿ ಅನಾಥಾಲಯ, ಕನ್ಯಾ ಪಾಠಶಾಲೆ ಹಾಗೂ ಕ್ರಾಂತಿಕಾರಿ ಸಾಮಾಜಿಕ ಚಟುವಟಿಗಳ ಹರಿಕಾರರಾದ ಮಹಾತ್ಮ ಜ್ಯೋತಿಬಾ ಫುಲೆ ಅವರ ಪುಣ್ಯಸ್ಮರಣೆಯಂದು ನನ್ನ ಭಕ್ತಿಪೂರ್ವಕ ನಮನಗಳು. ಅವರು ಪ್ರತಿಪಾದಿಸಿದ ಮೌಲ್ಯಗಳ ಮಹತ್ವ ಸಾರೋಣ.
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ 1 ರಿಂದ 5 ನೇ ತರಗತಿ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ tw.kar.nic.in ಗೆ ಭೇಟಿ ನೀಡಿ. @kmvstdcl
ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತದ ಹೆಮ್ಮೆಯ ವೀರಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಸ್ಮೃತಿದಿನದಂದು ನನ್ನ ಶತ ಶತ ನಮನಗಳು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧನನ್ನು ನಾವೆಲ್ಲರೂ ಸ್ಮರಿಸೋಣ. #sandeepunnikrishnan #MumbaiTerrorAttack
ಕೇಂದ್ರ ಮತ್ತು ರಾಜ್ಯದ ನಡುವೆ ಸಮನ್ವಯದ ಕೊಂಡಿಯಂತೆ ಕಾರ್ಯನಿರ್ವಹಣೆ ಮಾಡುತ್ತಿರುವ ಕೇಂದ್ರ ಸಚಿವರಾದ @JoshiPralhad ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ದಯಪಾಲಿಸಿ, ಜೀವನದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯುವಂತಾಗಬೇಕು ಎಂದು ಪ್ರಾರ್ಥಿಸುವೆ.
ಮುಂಬೈ ದಾಳಿ ಕರಾಳ ದಿನ ಮುಂಬೈ ಮೇಲಿನ ಭಯೋತ್ಪಾದಕರ ದಾಳಿ ದೇಶದ ಇತಿಹಾಸದ ಕರಾಳ ದಿನ. ಉಗ್ರರ ದಾಳಿಗೆ ಎದೆಯೊಡ್ಡಿ ಪ್ರಾಣ ಕಳೆದುಕೊಂಡ ಯೋಧರು ಮತ್ತು ಸಾರ್ವಜನಿಕರಿಗೆ ನನ್ನ ಗೌರವಪೂರ್ವಕ ನಮನಗಳು. #MumbaiTerrorAttack
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನ ರಚನಾ ಸಮಿತಿಯ ಸದಸ್ಯರನ್ನು ನಾವೆಲ್ಲರೂ ಸ್ಮರಿಸೋಣ.
ಭಾರತೀಯ ಸಂವಿಧಾನ ದಿನ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ನವ ಭಾರತ ನಿರ್ಮಾಣಕ್ಕೆ ಸಮಾನತೆ-ಸಹೋದರತ್ವ ತತ್ವಗಳ ಭದ್ರ ಬುನಾದಿ ಹಾಕಿದ ನಮ್ಮ ಭಾರತ ಸಂವಿಧಾನ ಅಂಗೀಕರಿಸಲ್ಪಟ್ಟ ಈ ದಿನದಂದು ಸರ್ವರಿಗೂ ಭಾರತ ಸಂವಿಧಾನ ದಿನದ ಶುಭಾಶಯಗಳು.
ICICI ಫೌಂಡೇಶನ್‌ನಿಂದ ತರಬೇತಿ, ಬಾಣಸಿಗ ತರಬೇತಿ ಮತ್ತು ಹೂವಿನ ಅಲಂಕಾರ, ಸೌರ ಫಲಕ ದುರಸ್ತಿ ಮತ್ತು ಸೇವೆ ಮತ್ತು ಇಂದಿನ ಜಾಗತಿಕ ಮಾರುಕಟ್ಟೆಯಲ್ಲಿ ಉದ್ಯೋಗಾವಕಾಶಗಳಿಗಾಗಿ ಬೇಡಿಕೆಯಿರುವ ಇತರ ವಿಷಯಗಳಂತಹ ವಿವಿಧ ತರಬೇತಿ ಕಾರ್ಯಕ್ರಮಗಳು ಮತ್ತು ಉದ್ಯಮಗಳನ್ನು ಸ್ಥಾಪಿಸಲು ಮಹಿಳಾ ಪದವೀಧರರನ್ನು ಬೆಂಬಲಿಸಲು, ಪ್ರತಿಷ್ಠಿತ IIM -ಬಿ ಸಂಸ್ಥೆ.
Retweeted by B Sriramulu
ಜಿಲ್ಲೆಯ ಅಭಿವೃದ್ಧಿಗೆ ಅವರ ಕೊಡುಗೆಯನ್ನು ಎಂದಿಗೂ ಮರೆಯುವಂತಿಲ್ಲ. ಅವರ ನಿಧನದಿಂದ ಒಬ್ಬ ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ. ಮೃತರ ಆತ್ಮಕ್ಕೆ ದೇವರು ಸದ್ಗತಿಯನ್ನು ಕರುಣಿಸಿ, ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. 2/2 #???????
ಬಳ್ಳಾರಿ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯರು, ವೀರಶೈವ ಸಂಘದ ಮಾಜಿ ಅಧ್ಯಕ್ಷರು, ಶ್ರೀಯುತ ಕೋಳೂರು ಬಸವನಗೌಡರ ಅವರು ನಿಧನರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. 1/2
ಗದಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಶ್ರೀಯುತ ಶ್ರೀಶೈಲಪ್ಪ ಬಿದರೂರು ಅವರು ಹೃದಯಾಘಾತದಿಂದ ನಿಧನರಾದ ಸುದ್ದಿ ಕೇಳಿ ತೀವ್ರ ದುಃಖಿತನಾಗಿದ್ದೇನೆ. 1/2
ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ವೇಳೆ ಅವರ ಜೊತೆ ಅತ್ಯಂತ ಆತ್ಮೀಯ ಒಡನಾಟವಿತ್ತು. ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಪ್ರಾಪ್ತಿಸಿ, ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. 2/2 #???????
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ರಾಜ್ಯಸಭಾ ಸದಸ್ಯರು, 'ಕರ್ನಾಟಕ ರತ್ನ' ಪದ್ಮವಿಭೂಷಣ ಪರಮಪೂಜ್ಯ ಧರ್ಮಸ್ಥಳದದ ಧರ್ಮಾಧಿಕಾರಿ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಶುಭಾಶಯಗಳು. ಶ್ರೀ ಮಂಜುನಾಥ ಸ್ವಾಮಿಯು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.
Twiends™ uses the Twitter™ API, displays it's logo & trademarks, and is not endorsed or certified by them. These items remain the property of Twitter. We do not sell followers, we only provide display advertising. Bots & fake accounts are not permitted on twiends. © 2009
Grow Your Twitter Free
Want To Grow Your Twitter?
We help other people find and follow you on Twitter.
Key Info:
Started in 2009
Over 6 million signups
Country targeting provided
We never auto tweet to your timeline
We never auto follow others
We actively moderate our community
Please Share
Please upgrade your browser  chrome